ನಡುರಾತ್ರಿಯಲ್ಲೂ ಏನೋ ತವಕ..
ಈ ತವಕ ನಿಲ್ಲುವುದಿಲ್ಲ ನಿನ್ನ ನೋಡುವ ತನಕ.

ನಿನ್ನ ನೆನಪಿನಲ್ಲೇ ಕೊರಗುತ್ತಿದೆ ನನ್ನೀ ಮನ..
ನಿನ್ನ ಹೆಸರೇ ಜಪಿಸುತ್ತಿದೆ ನನ್ನ ಪ್ರತಿಯೊಂದು ರಕ್ತದ ಕಣ.

ನಿನ್ನ ಮುದ್ದಾದ ಕೆನ್ನೆಯು ಬಯಸಿದೆಯಾ ಒಂದು ಸಿಹಿಮುತ್ತು?
ನನ್ನ ಈ ಮಾತಿಗೆ ನಾಚಿಕೊಳ್ಳುವ ನೀನು ನನಗೆ ತರಿಸುತ್ತೀಯ ಮತ್ತು.

ಕೆಂದುಟಿಯ ನಡುವಿನಿಂದ ಇಣುಕುವ ಆ ನಿನ್ನ ಮುದ್ದು ನಗು..
ನಿನ್ನ ಆ ಮುದ್ದಾದ ನಗುವನ್ನು ನೋಡುತ್ತಾ ಆಗುತ್ತೇನೆ ನಾನೊಂದು ಪುಟ್ಟ ಮಗು.

ನಾಚಿದಾಗ ಕೆಂಪಾಗುವ ನಿನ್ನಾ ಕೆನ್ನೆ..
ಕರೆದಿವೆ ಬಳಿಗೆ ನನ್ನೇ.

ನನ್ನ ರಕ್ತದ ಕಣದಲ್ಲಿ ಇರುವುದೆಲ್ಲ ನಿನ್ನ ಹೆಸರು..
ನಿನಗೆಂದೇ ಇನ್ನೂ ಉಳಿದಿದೆ ಈ ನನ್ನ ಉಸಿರು.


-ಸಂತು

Design your blog - select from dozens of ready-made templates or make your own; simply “point & click” - Click here

Likes

Comments

ಮೊದಲ ಮಳೆಗೆ ಭೂಮಿ ಕಾತರದಿಂದ ಕಾಯುವ ಹಾಗೆ ನಿನ್ನ ಬರುವಿಕೆಯನ್ನೇ ಎದುರು ನೋಡುತ್ತಾ ಇದ್ದೇನೆ.
ನಿನ್ನ ಸನಿಹಕ್ಕೆ ಬಂದಾಗ ಆಗುವ ಅನುಭವ ವರ್ಣಿಸಲು ಅಸಾಧ್ಯ.
ನಿನ್ನ ಮಾತುಗಳಲ್ಲಿ ನನ್ನನ್ನೇ ನಾನು ಮರೆಯುತ್ತಿದ್ದೇನೆ.
ಮನಸ್ಸಿನಲ್ಲಿ ಇರುವುದೆಲ್ಲವನ್ನೂ ಹೇಳಬೇಕೆಂದುಕೊಂಡರೂ ನಿನ್ನ ಮುದ್ದಾದ ನಗು ಎಲ್ಲವನ್ನು ಮರೆಸಿ ನನ್ನನ್ನು ಸುಮ್ಮನಾಗಿಸುತ್ತದೆ.
ನೀ ಬಂದಾಗಿನಿಂದ ನನ್ನ ಕಷ್ಟಗಳೆಲ್ಲಾ ದೂರಾದ ಹಾಗೆ ನಿನ್ನ ಜೀವನದ ಕಷ್ಟಗಳೆಲ್ಲವೂ ಮರೆಯಾಗಬೇಕು.
ನಿನ್ನ ಒಂದು ಸ್ಪರ್ಷ ನನ್ನನ್ನು ಸ್ಥಂಭೀಭೂತನನ್ನಾಗಿ ಮಾಡಿದೆ.
ನಿನ್ನ ಕಣ್ಣಿನ ಆ ಹೊಳಪು ನನ್ನ ಜೀವನದ ಬೆಳಕಾಗಿ ಮೂಡಿ ಬಂದಿದೆ.
ಆ ಕೆಂದುಟಿಯ ನಡುವಿನಿಂದ ಇಣುಕಿ ನೋಡುವ ಆ ನಗುವಿಗೆ ಎಂತಹ ಕಷ್ಟವನ್ನೂ ತೊಲಗಿಸುವ ಶಕ್ತಿಯಿದೆ.
ಆ ಸುಂದರ ನಗುವು ನನ್ನ ಮನಸ್ಸಿನೊಳಗೆ ಕಚಗುಳಿ ಕೊಡುತ್ತಿದೆ.
ನಿನ್ನ ಮುದ್ದು ಮುಖವೇ ನನ್ನ ಎಲ್ಲಾ ಕಷ್ಟಗಳಿಗೆ ಔಷಧಿ.

Likes

Comments

ನಾನೊಬ್ಬ ಭಾರತೀಯ ಹೌದು ಆದರೆ ಅದಕ್ಕಿಂತ ಮೊದಲು ನಾನೊಬ್ಬ ಕನ್ನಡಿಗ ಎಂದು ಹೇಳಲು ಯಾಕೆ ಎಲ್ಲ ಕನ್ನಡಿಗರು ಹಿಂದೇಟು ಹಾಕುತ್ತಿದ್ದಾರೆ? ಕನ್ನಡಕ್ಕಾಗಿ ಹೋರಾಡುವವರನ್ನು ಅಸಡ್ಡೆಯಾಗಿ ನಮ್ಮ ಕನ್ನಡಿಗರೇ ನೋಡುತ್ತಿರುವುದು ಯಾಕೆ? ಎಲ್ಲ ಜನರ ಮುಂದೆ ನಮ್ಮ ತಾಯಿಯನ್ನು ಅಮ್ಮಾ ಎಂದು ಹೆಮ್ಮೆಯಿಂದ ಕರೆಯುವ ನಾವು ನಮ್ಮ ಮಾತೃ ಭಾಷೆ ಎಂದು ಯಾಕೆ ಹೆಮ್ಮೆಯಿಂದ ಹೇಳಿಕೊಳ್ಳುವುದಿಲ್ಲ? ಕೆಲವರು ಹೇಳಿದರೂ ಅಂತಹವರಿಗೆ ಹೀಯಾಳಿಕೆ ಏಕೆ? ಕನ್ನಡದ ಪರವಾಗಿ ಮಾತನಾಡಿದರೆ ಹಿಂದಿ ವಿರೋಧಿ ಎಂಬ ಪಟ್ಟ ಏಕೆ? ಇದೆಲ್ಲದರ ನಡುವೆ ನಮ್ಮ ಭಾಷೆಯ ಬಗ್ಗೆ ಗೌರವದಿಂದ ಮಾತನಾಡುವವರನ್ನು ಒಂದು ರಾಜಕೀಯ ಪಕ್ಷದ ಕಾರ್ಯಕರ್ತ ಎಂಬಂತಹ ಟೀಕೆ ಏಕೆ? ಒಬ್ಬ ತೆಲುಗಿನವನು ಇನ್ನೊಬ್ಬ ಆಂಧ್ರದಿಂದ ಬಂದವನು ಎಂದು ಗೊತ್ತಾದ ಕೂಡಲೇ ತೆಲುಗಿನಲ್ಲಿ ಮಾತನಾಡುತ್ತಾನೆ, ತಮಿಳಿನವನು ತಮಿಳಿನಲ್ಲಿ ಮಾತನಾಡುತ್ತಾನೆ ಅದೇ ಒಬ್ಬ ಕನ್ನಡಿಗ ಕನ್ನಡದಲ್ಲಿ ಮಾತನಾಡಿದರೆ ಅವರು ನಮ್ಮ ಸತ್ಪ್ರಜೆಗಳಿಗೆ ಅವಿಧ್ಯಾವಂತರಾಗಿ ಕಾಣಿಸುತ್ತಾರೆ. ಬೇರೆಯವರಿಗೆ ಇರುವ ಭಾಷಾಭಿಮಾನ ನಮ್ಮ ಜನರಿಗೆ ಯಾಕಿಲ್ಲ? ಕನ್ನಡದಲ್ಲಿ ವ್ಯವಹರಿಸಲು ನಮಗೇನು ಕಷ್ಟ? ಅನವಶ್ಯಕ ಹಿಂದಿ ಹೇರಿಕೆ ವಿರೋಧಿಸಿದರೆ ನಿಮಗೇನು ತೊಂದರೆ? ಹಿಂದಿ ರಾಷ್ಟ್ರೀಯ ಭಾಷೆ ಅಲ್ಲ ಎಂದು ಗೊತ್ತಿಲ್ಲವೇ? 
ಕನ್ನಡಿಗನಾಗಿ ನಿಮ್ಮ ತಾಯಿಯನ್ನು ಮಾತ್ರ ತಾಯಿ ಅಂತ ಕರೆಯಿರಿ. ನೀವು ಬೇಕಾದರೆ ಬೇರೆ ಭಾಷೆಗೆ ತಾಯಿ ಸ್ಥಾನ ಕೊಡಿ ಆದರೆ ನನ್ನ ತಾಯಿಭಾಷೆ ಯಾವತ್ತಿದ್ದರೂ ಕನ್ನಡ.
ಕೆಲವು ಜನರು ತಮಗೆ ಕನ್ನಡ ಬಂದರೂ ಮಾತನಾಡುವುದಿಲ್ಲ. ಇಂಗ್ಲೀಷ್ ಅಥವಾ ಹಿಂದಿ ಮಾತನಾಡಿ ಅದ್ಯಾವ ವೈಭೋಗ ಅನುಭವಿಸುತ್ತಾರೋ ನನಗಂತೂ ಗೊತ್ತಿಲ್ಲ. ನೀವು ನಿಮ್ಮ ತಾಯಿಯನ್ನೇ ತಾಯಿ ಎಂದು ಕರೆಯುತ್ತೀರೋ ಅಥವಾ ಬೇರೆಯವರನ್ನು ಕರೆಯುತ್ತೀರೋ??
ನಿಮಗೆ ನಿಜವಾಗಲೂ ನೀವು ಹುಟ್ಟಿದ ನೆಲದ ಮೇಲೆ ಸ್ವಲ್ಪವಾದರೂ ಅಭಿಮಾನ ಇದ್ದರೆ ಬನ್ನಿ ಸಾಧ್ಯವಾದಷ್ಟು ಕನ್ನಡದಲ್ಲೇ ಮಾತನಾಡೋಣ, ವ್ಯವಹರಿಸೋಣ. ಕನ್ನಡದ ಬಗ್ಗೆ ಅಭಿಮಾನ ಇದ್ದವರನ್ನು ಗೌರವಿಸೋಕೆ ಆಗದೇ ಇದ್ದರೂ ಪರವಾಗಿಲ್ಲ ಟೀಕಿಸಬೇಡಿ. ಕನ್ನಡವನ್ನು ಅಭಿವೃದ್ದಿ ಮಾಡಲು ನಮ್ಮ ಸರ್ಕಾರಕ್ಕೆ ದೌರ್ಬಲ್ಯ ಇರಬಹುದು ಆದರೆ ನಮಗೆ ಜೀವನ ಕೊಟ್ಟ ಭಾಷೆಯನ್ನು ನಮ್ಮ ಜೀವನದ ಭಾಷೆಯನ್ನಾಗಿ ಮಾಡಿಕೊಳ್ಳಲು ನಮಗೆ ಯಾವುದೇ ತೊಂದರೆ ಇಲ್ಲ. ನಮ್ಮ ಮಾತೃಭಾಷೆಗೆ ನಮ್ಮ ಕೈನಲ್ಲಿ ಆಗುವ ಕಿಂಚಿತ್ತು ಸೇವೆಯಾದರೂ ಮಾಡೋಣ.

ಅಂತಿಮವಾಗಿ: ನಾನು ಯಾವುದೇ ರಾಜಕೀಯ ಪಕ್ಷದ ಬೆಂಬಲಿಗ ಅಲ್ಲ. ನನ್ನ ಕನ್ನಡದ ಬಗ್ಗೆ ಗೌರವ ಇರುವ ಒಬ್ಬ ಕನ್ನಡಿಗ ಅಷ್ಟೇ..

ನನ್ನ ಕನ್ನಡ ನನ್ನ ಹೆಮ್ಮೆ

-ಸಂತು

Likes

Comments

ನೀಲಾಕಾಶದಲ್ಲಿ ಇರುವ ಮೋಡಗಳೆಷ್ಟೋ

ಆದರೆ ಮಳೆ ತರಿಸುವ ಮೋಡ ಕೆಲವೇ ಕೆಲವು..

ನನ್ನ ಜೀವನದಲ್ಲಿ ಭೇಟಿ ಮಾಡಿದ ಮಂದಿಗಳೆಷ್ಟೋ

ಆದರೆ ಪ್ರೀತಿಯ ಮಳೆ ಸುರಿಸಿ ಮತ್ತೆ ನನಗೆ ಬದುಕಬೇಕೆನ್ನುವ ಆಸೆ ಚಿಗುರಿಸಿದವಳು ನೀನು..

ಇಲ್ಲದ ದೇವರ ನಾ ಏಕೆ ಹುಡುಕಲಿ..

ನಾ ಆರಾಧಿಸುವ ಪ್ರೀತಿಯ ದೇವತೆ ನನ್ನ ಕಣ್ಣ ಮುಂದೆಯೇ ಇರುವಾಗ..

ನನ್ನ ಮನಸ್ಸಿನಾಳದಲ್ಲಿ ಪ್ರೀತಿ ಎಂಬ ಕುಂಚದಿಂದ ಸಾವಿರಾರು ಚಿತ್ರ ರಚಿಸಿ

ದೂರದಲ್ಲಿ ನಗುತ್ತಾ ನಿಂತಿರುವೆ ಏಕೆ?

ಅವಕ್ಕೆಲ್ಲಾ ಬಣ್ಣ ತುಂಬಬೇಕಾದವಳು ನೀನೇ ಅಲ್ಲವೇ??

ನೀ ಬಿಡಿಸಿದ ಆ ಚಿತ್ರಗಳು ನನ್ನ ಜೀವನದಲ್ಲಿ ನಿನ್ನ ಬರುವಿಕೆಗಾಗಿ ಹಾತೊರೆಯುತ್ತಾ ಚಡಪಡಿಸುತ್ತಾ ಚಾತಕ ಪಕ್ಷಿಯಂತೆ ಕಾಯುತ್ತಾ ಕುಳಿತಿವೆ..

ನನ್ನ ಮನದಲ್ಲಿ ನೀ ಬಿಡಿಸಿದ ಚಿತ್ರಗಳಿಗೆ ನಾ ನೀರೆರೆದು ಪೋಷಿಸಿದೆ.

ನಾ ನೀರೆರೆದು ಪೋಷಿಸಿದರೂ ಈ ಮನದ ಮನಸ್ಸಿನ ತುಂಬೆಲ್ಲಾ ಆವರಿಸಿರುವುದು ನೀನೆ‌..

-ಸಂತು

Likes

Comments

ಈ ಸಮಾಜ ಪುರುಷ ಪ್ರಧಾನ ಸಮಾಜ ಅಂದರೆ ಈಗ ಎಲ್ಲರೂ ಗೇಲಿ ಮಾಡುತ್ತಾರೆ. ಆದರೆ ನಿಜವಾಗಲೂ ಈ ೨೧ನೇ ಶತಮಾನದಲ್ಲೂ ನಮ್ಮ ಸಮಾಜ ಹೇಗಿದೆ ಎಂಬುದನ್ನು ತಂದೆ ಇಲ್ಲದೇ ಇರುವ ಮಗಳಿಗೆ ಕೇಳಿ. ಅವರ ಬಾಯಿಂದ ಬರುವ ಪದಗಳು ನಮ್ಮ ಮನ ಕಲಕುತ್ತವೆ. ಅದಕ್ಕೆ ಒಂದು ಚಿಕ್ಕ ಉದಾಹರಣೆ ನನ್ನ ಮನಸ್ಸಿನಲ್ಲಿ ರೆಕ್ಕೆ ಬಿಚ್ಚಿದ ಈ ಕಥೆ..
ಈ ಕಥೆಯಲ್ಲಿ ಬರುವ ಹುಡುಗಿ ಹುಟ್ಟುವ ಮೊದಲೇ ಇದು ಹೆಣ್ಣು ಮಗು ಆದರಿಂದ ಇದು ನನಗೆ ಬೇಡ ಎಂದು ಹೇಳಿ ಹುಟ್ಟಿಗೆ ಮೊದಲೇ ಮಗುವನ್ನು ಕೊಲ್ಲಲು ಪ್ರಯತ್ನಿಸುತ್ತಾನೆ ಆಕೆಯ ತಂದೆ. ಆದರೂ ಅವಳ ಅದೃಷ್ಟ ಚೆನ್ನಾಗಿ ಇದ್ದಿದ್ದರಿಂದ ಭೂಮಿಗೆ ಬರುತ್ತಾಳೆ. ಅಷ್ಟಕ್ಕೇ ಅವಳ ಕಷ್ಟಗಳು ಕೊನೆಗೊಂಡವು ಎಂದು ಅಂದುಕೊಂಡರೆ ಅದು ನಿಮ್ಮ ಮೂರ್ಖತನ. ತಂದೆಯ ಪ್ರೀತಿಯನ್ನೇ ನೋಡದ ಹುಡುಗಿಗೆ ತಾಯಿಯ ಪ್ರೀತಿಯಾದರೂ ಸಿಕ್ಕಿತಾ? ಅದೂ ಇಲ್ಲ. ತಾಯಿಗೆ ಸಂಸಾರ ಮುನ್ನಡೆಸುವ ಜವಾಬ್ದಾರಿ ಇದ್ದಿದ್ದರಿಂದ ಈ ಹುಡುಗಿಗೆ ತಾಯಿಯ ಪ್ರೀತಿಯೂ ಸರಿಯಾಗಿ ಸಿಗಲಿಲ್ಲ. ಸಾಕುತಾಯಿಯನ್ನೇ ನಿಜವಾದ ತಾಯಿ ಎಂದುಕೊಂಡು ಬೆಳೆದಳು. ಹಸಿವಾದಾಗ ಅಥವಾ ಏನಾದರೂ ಪೆಟ್ಟು ಮಾಡಿಕೊಂಡು ಬಂದರೂ ಅವಳಿಗೆ ಸಾಂತ್ವಾನ ಮಾಡಲು ಯಾರೂ ಇರುತ್ತಿರಲಿಲ್ಲ. ಎಲ್ಲರ ಪ್ರೀತಿಯಿಂದ ದೂರ ಉಳಿದ ಈ ಹುಡುಗಿಗೆ ಎಲ್ಲ ಪ್ರೀತಿಯನ್ನೂ ನೀಡಿದ್ದು ನೃತ್ಯ. ಭರತನಾಟ್ಯ ದಿಂದ ಹಿಡಿದು ಎಲ್ಲಾ ರೀತಿಯ ನೃತ್ಯವನ್ನು ಲೀಲಾಜಾಲವಾಗಿ ಮಾಡುತ್ತಿದ್ದ ಈ ಹುಡುಗಿ ತನ್ನ ನೋವನ್ನೆಲ್ಲಾ ನೃತ್ಯದ ರೂಪದಲ್ಲಿ ಮರೆಯುತ್ತಿದ್ದಳು. ಅವಳು ಎಷ್ಟು ಅದನ್ನು ಮನಸ್ಸಿಗೆ ಹಚ್ಚಿಕೊಂಡಳು ಎಂದರೆ ಅವಳ  ಉಸಿರು ಕೂಡಾ ಅದೇ ಎಂದು ಹೇಳುತ್ತಿದ್ದಳು. ಎಲ್ಲವೂ ಸರಿಯಾಗುತ್ತಿದೆ ಎಂದು ಖುಷಿಪಡುವ ಸಂದರ್ಭದಲ್ಲಿ ಅವಳ ಸಂತೋಷಕ್ಕೆ ಅಡ್ಡಿ ಆಗಿದ್ದು ಇದೇ ಸಮಾಜ ಹಾಗೂ ಅವಳ ಸುತ್ತಮುತ್ತಲೇ ಇದ್ದ ಕೆಲವು ವ್ಯಕ್ತಿಗಳು. ತಂದೆ ಇಲ್ಲದ ಹುಡುಗಿ ನೃತ್ಯ ಮಾಡಬಾರದು ಎಂಬ ಅವಳ ಸಂಬಧಿಕರ ಹಲವು ಚುಚ್ಚುಮಾತುಗಳು ಅವಳ ಮನಸ್ಸನ್ನು ತುಂಬಾ ಕಾಡಿದವು‌. ಇಂತಹ ಕೆಟ್ಟ ವ್ಯಕ್ತಿಗಳನ್ನು ಒಂಟಿಯಾಗಿ ಎದುರಿಸಲಾಗದೇ ಅವಳು ತನ್ನ ಮನಸ್ಸಿನ ಬಹುದೊಡ್ಡ ಕನಸನ್ನು ತ್ಯಜಿಸಿದಳು. ಕನಸನ್ನು ಕೊಂದರೂ ಅವಳ ಮನಸ್ಸು ಅವಳನ್ನು ಇನ್ನೂ ಆ ಕನಸಿನ ಕಡೆಗೆ ಎಳೆದೊಯ್ಯುತ್ತಿತ್ತು. ತನ್ನ ಕಷ್ಟಗಳನ್ನು ಯಾರಿಗೂ ಹೇಳಲಾಗದೇ ಮನಸ್ಸಿನಲ್ಲೇ ನುಂಗಿಕೊಂಡು ತನ್ನ ಕನಸನ್ನೇ ನೆನೆಯುತ್ತಾ ಆಕೆ ಇಂದಿಗೂ ಬದುಕುತ್ತಿದ್ದಾಳೆ.
ಇಂತಹ ಅನೇಕ ಜನರು ನಮ್ಮ ನಿಮ್ಮ ಮಧ್ಯದಲ್ಲೇ ಇರುತ್ತಾರೆ. ಅವರ ಕನಸನ್ನು ಸಾಕಾರ ಮಾಡೋಕೆ ಆಗದೇ ಇದ್ದರೂ ಹೊಟ್ಟೆಕಿಚ್ಚು ಪಟ್ಟುಕೊಂಡು ಅವರ ಕನಸಿಗೆ ಮುಳುವಾಗಬೇಡಿ. ಸಾಧ್ಯವಾದರೆ ಅವರ ಮನಸ್ಸಲ್ಲಿರುವ ಕನಸನ್ನು ನನಸು ಮಾಡುವುದಕ್ಕೆ ಪ್ರಯತ್ನಿಸಿ ಇಲ್ಲವಾದರೆ ಸುಮ್ಮನಿರಿ..
ಕೆಲವು ಸಂದರ್ಭಗಳಲ್ಲಿ ಈ ಸಮಾಜದಲ್ಲಿ ಪುರುಷರ ಪಾತ್ರ ಇಲ್ಲದಿದ್ದರೂ ಅವರ ಹೆಸರು ಹೇಳಿಕೊಂಡು ಬೇರೊಬ್ಬರ ಕನಸನ್ನು ನುಚ್ಚುನೂರು ಮಾಡುವ ಅನೇಕ ಮಹಿಳೆಯರು ಇದ್ದಾರೆ. ಅಂತಹ ಕೆಲವರಿಂದ ಕೂಡ ಈ ಸಮಾಜ ಪುರುಷ ಪ್ರಧಾನ ಆಗಿರಬಹುದು. ಇದಕ್ಕೆ ಕಾರಣರಾದ ಆ ಮಹಾತಾಯಿಯರಿಗೆ ಒಂದೇ ಒಂದು ಪ್ರಶ್ನೆ ಕೇಳುತ್ತಿದ್ದೇನೆ. ನಿಮ್ಮನ್ನು ನೀವು ಆ ಹುಡುಗಿಯ ಸ್ಥಾನದಲ್ಲಿ ನಿಲ್ಲಿಸಿ ನೋಡಿ. ನಿಮ್ಮ ಮನಸ್ಸಿಗೆ ಏನು ಅನಿಸುತ್ತಿದೆ ಹಾಗೂ ನೀವು ಮಾಡಿದ್ದೇನು ಎಂಬುದನ್ನು ಒಮ್ಮೆ ತಾಳೆ ಹಾಕಿ ನೋಡಿ..

- ಸಂತು

Likes

Comments

ನಿನ್ನ ಕಣ್ಣೀರು ನೋಡಿದಾಗಲೆಲ್ಲಾ ಅಂದುಕೊಳ್ಳುತ್ತೇನೆ 
ಬಂದು ನಿನ್ನ ಕಣ್ಣೀರು ಒರೆಸಬೇಕೆಂದು
ಆದರೇನು ಮಾಡಲಿ ನಾ
ಬದುಕಿಲ್ಲವೇ..

ನಿನ್ನ ಕಷ್ಟಗಳನ್ನು ನೋಡಿದಾಗಲೆಲ್ಲಾ ಅಂದುಕೊಳ್ಳುತ್ತೇನೆ
ಅದೆಲ್ಲವನ್ನೂ ನಾನು ತೆಗೆದುಕೊಳ್ಳಬೇಕೆಂದು
ಆದರೇನು ಮಾಡಲಿ ನಾ
ಬದುಕಿಲ್ಲವೇ..

ನೀನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದ ನಿನ್ನ ಮಗ ನಿನ್ನನ್ನು ನಡುನೀರಿನಲ್ಲಿ ಕೈಬಿಟ್ಟು ಹೋದಾಗ ನಿನ್ನ ಕೈಹಿಡಿದು ದಡ ಸೇರಿಸಬೇಕೆಂದುಕೊಂಡೆ
ಆದರೇನು ಮಾಡಲಿ ನಾ
ಬದುಕಿಲ್ಲವೇ..

ನಿನ್ನ ಇಳಿವಯಸ್ಸಿನಲ್ಲಿ ನಿನ್ನ ಮನಸ್ಸಿಗೆ ಖುಷಿ ಕೊಡುವಂತಹ ಒಂದು ಪುಟ್ಟ ಮಗು ಕೊಡಬೇಕೆಂದು ಅಂದುಕೊಂಡೆ
ಆದರೇನು ಮಾಡಲಿ ನಾ
ಬದುಕಿಲ್ಲವೇ..

ನಿನ್ನ ಪ್ರೀತಿಯ ಕುಟುಂಬ ಸಂಕಷ್ಟದಲ್ಲಿ ಸಿಲುಕಿದಾಗ ಬಂದು ನನ್ನ ಹೆಗಲು ಕೊಡಬೇಕೆಂದು ಅಂದುಕೊಂಡೆ
ಆದರೇನು ಮಾಡಲಿ ನಾ
ಬದುಕಿಲ್ಲವೇ..

ಈ ಪ್ರಪಂಚ ಸರಿ ಇಲ್ಲ ಎಂದು ಕಿರುಚಿಕೊಳ್ಳುವ ನಿನ್ನಂಥವರಿಗೆ ನೀವು ಮೊದಲು ಸರಿಯಾಗಿ ನೀವೇ ತಾನೆ ಪ್ರಪಂಚ ನೀವು ಸರಿ ಆದರೆ ತಾನೆ ಪ್ರಪಂಚ ಸರಿ ಆಗುವುದು ಎಂದು ಜೋರಾಗಿ ಇಡೀ ಪ್ರಪಂಚಕ್ಕೇ ಕೇಳುವ ಹಾಗೆ ಕೂಗಿ ಹೇಳಬೇಕು ಎಂದುಕೊಂಡೆ
ಆದರೇನು ಮಾಡಲಿ ನಾ
ಬದುಕಿಲ್ಲವೇ..

(ಸಾಯುವ ಮುನ್ನ ಹೆಣ್ಣು ಭ್ರೂಣ ಒಂದರ ಆರ್ತನಾದ ಇದು)

$@nthü

Likes

Comments

ಮನಸ್ಸಿನಲ್ಲಿ ಆಗುತ್ತಿರುವ ತೊಳಲಾಟ ನಿವಾರಣೆಗೆ ನಿನ್ನ ಭೇಟಿಯೊಂದೇ ಪರಿಹಾರ.

ನಿನ್ನ ಮುದ್ದಾದ ನಗುವಿನಲ್ಲೇ ಕಳೆದು ಹೋಗುವ ಬಯಕೆ ಈ ನನ್ನ ಮನಕೆ.

ಮುಂಜಾನೆಯಲ್ಲೂ ಮುಸ್ಸಂಜೆಯಲ್ಲೂ ನಿನ್ನ ನೆನಪೇ ಕಾಡುತ್ತಿದೆ. ನಿನ್ನ ಆ ಅಪ್ಪುಗೆಯಲ್ಲಿ ಮಗುವಾಗಿ ಮಲಗುವ ಬಯಕೆ ಈ ನನ್ನ ಮನಕೆ.
ತುಂಬಾ ಕಾಯಿಸದೇ ಬೇಗ ಬಾ ಗೆಳತಿ.

ನೀನು ದೂರ ಇದ್ದಾಗಲೇ ನಿನ್ನೆಲ್ಲಾ ಮಾತುಗಳು ನನ್ನ ಕಿವಿಯೊಳಗೆ ರಿಂಗಣಿಸುತ್ತಿದೆ.
ನಿನ್ನ ನೋಡಬೇಕೆನ್ನುವ ಬಯಕೆ ಹೆಮ್ಮರವಾಗಿ ಬೆಳೆದಿದೆ..
ಮುಸ್ಸಂಜೆಯ ತಿಳಿಗಾಳಿಯಲ್ಲೂ ನಿನ್ನ ಪಿಸುಮಾತೇ ನನಗೆ ಕೇಳಿಸುತ್ತಿದೆ.
ತುಂಬಾ ಕಾಯಿಸದೇ ಬೇಗ ಬಾ ಗೆಳತಿ.

ನಿನ್ನ ನೋಡದೇ ಇರುವ ನನ್ನ ಮನ ಈಗ ತಾನೇ ಹುಟ್ಟಿರುವ ಹಸುವಿನ ಕರುವಿನಂತೆ ಚಡಪಡಿಸುತ್ತಿದೆ.
ನೀನಿಲ್ಲದ ನೀರವ ಮೌನ ನನ್ನ ಮನ ಕಾಡುತ್ತಿದೆ‌.

ನೀ ಪಕ್ಕದಲಿ ಇಲ್ಲದೇ ಇರುವಾಗ ಬೀಸುವ ತಂಗಾಳಿಯೂ ಕೂಡಾ ಬಿರುಗಾಳಿಯಂತೆ ಭಾಸವಾಗುತ್ತಿದೆ.

ತುಂಬಾ ಕಾಯಿಸದೇ ಬೇಗ ಬಾ ಗೆಳತಿ.

-ಸಂತು

Likes

Comments

ನನ್ನ ಮೇಲೇ ನನಗೆ ನಂಬಿಕೆ ಕಳೆದು ಹೋದಾಗ ಬಂದಾಕೆ ನೀನು.

ನಿನ್ನ ಏನೆಂದು ಕರೆಯಲಿ ನಾನು??

ನನಗಾಗಿ ನೀನು ದೇವರಲ್ಲಿ ಪ್ರಾರ್ಥಿಸುವೆ..

ನನಗೇ ನಿನ್ನ ಎಲ್ಲಾ ಸಮಯವನ್ನೂ ಅರ್ಪಿಸಿರುವೆ.

ನನ್ನ ಖುಷಿಯಲ್ಲೇ ನೀನು ನಿನ್ನ ಖುಷಿ ಕಾಣುತ್ತಿರುವೆ..

ನಾ ಏನೆಂದು ಕರೆಯಲಿ ನಿನ್ನಾ??

ನಿನ್ನಾ ಕಂಗಳ ಹೊಳಪು ನನ್ನ ಮನ ಮಿಡಿಯುವಂತೆ ಮಾಡಿದೆ..

ಮನದಲ್ಲಿ ಏನೋ ಕೋಲಾಹಲ ಆದರೂ ಅದರಲ್ಲಿ ಏನೋ ಸಂತಸವಿದೆ..

ನಿನ್ನಾ ಈ ಅಗಾಧವಾದ ಪ್ರೀತಿಯನ್ನು ನೋಡಿ ನಾನು ಮೂಕ ವಿಸ್ಮಿತನಾದೆ..

ನಿನ್ನ ಈ ಪ್ರೀತಿಗೆ ಸಾಟಿಯಾಗಿ ನಾನು ಏನನ್ನೂ ಕೊಡಲಾರೆ..

ನಿನ್ನಾ ಪ್ರೀತಿಗೆ ನನ್ನೀ ಮನ ನಿನಗೇ ಅರ್ಪಣೆ..

 -$@nthü

Likes

Comments